ಡಿಸೀಸ್ ಎಕ್ಸ್ ಎನ್ನುವುದು ಭವಿಷ್ಯದ ಸಾಂಕ್ರಾಮಿಕಕ್ಕೆ ಕಾರಣವಾಗುವ ಒಂದು ಕಾಲ್ಪನಿಕ, ಅಪರಿಚಿತ ಸೋಂಕು. ಇದನ್ನು ಫೆಬ್ರವರಿ ೨೦೧೮ ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್‍ಒ)ಯು ಕಾಯಿಲೆಗಳ ನೀಲನಕ್ಷೆಯ ಆದ್ಯತೆಯ ಕಿರುಪಟ್ಟಿಯಲ್ಲಿ ಸೇರಿಸಿ ಅಂಗೀಕರಿಸಿದೆ. ಅಮೇರಿಕಾದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಲರ್ಜಿ ಮತ್ತು ಸೋಂಕಿತ ರೋಗಗಳ ನಿರ್ದೇಶಕ ಆಂಥೋನಿ ಫೌಸಿಯವರು ಡಿಸೀಸ್ ಎಕ್ಸ್ ಎಂಬ ಪರಿಕಲ್ಪನೆಯನ್ನು ಪ್ರೋತ್ಸಾಹಿಸಿದರು. ೨೦೨೦ ರಲ್ಲಿ, ಡಬ್ಲ್ಯೂಎಚ್‍ಒವು ಕೆಲವು ತಜ್ಞ ಸಲಹೆಗಾರರನ್ನು ಒಳಗೊಂಡಂತೆ, ತೀವ್ರ ಉಸಿರಾಟದ ತೊಂದರೆಯ ಕೊರೊನಾವೈರಸ್-೨ ಸ್ಟ್ರೈನ್‌ನಿಂದ ಕೋವಿಡ್-೧೯ ಉಂಟಾಗಿದೆ ಎಂದು ಊಹಿಸಿದ್ದಾರೆ. == ತಾರ್ಕಿಕ ವಿವರಣೆ == ಮೇ ೨೦೧೫ ರಲ್ಲಿ, ವೈರಸ್‍ಗಳನ್ನು ಗುರುತಿಸಲು, ಲಸಿಕೆಗಳ / ಚಿಕಿತ್ಸೆಗಳ ಅನುಮೋದನೆಯ ನಡುವಿನ ಸಮಯವನ್ನು ಕಡಿಮೆ ಮಾಡುವಂತಹ ವಿಚಾರಗಳನ್ನು ಸೃಷ್ಟಿಸಲು, ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯಾಗಿ ಪರಿವರ್ತನೆ ಮಾಡಲು ಆರ್ & ಡಿ ನೀಲನಕ್ಷೆನ್ನು ರಚಿಸುವಂತೆ ವಿಶ್ವ ಆರೋಗ್ಯ ಸಂಘಟನೆಯನ್ನು ಸದಸ್ಯ ಸಂಸ್ಥೆಗಳು ಕೇಳಿಕೊಂಡವು. ಕೆಲವು ತಡೆಗಟ್ಟಲಾಗುವ ಸಾಂಕ್ರಾಮಿಕ ರೋಗಗಳ (ಎಮರ್ಜಿಂಗ್ ಇನ್‌ಫೆಕ್ಟಸ್ ಡಿಸೀಸ್-ಇಐಡಿ ಗಳ) ಮೇಲೆ ಗಮನ ಹರಿಸಲಾಗಿದೆ. ಹತ್ತು ನೀಲನಕ್ಷೆ ಆದ್ಯತೆಯ ಕಾಯಿಲೆಗಳ ಪಟ್ಟಿಯನ್ನು ರಚಿಸಲು ವಿಶ್ವ ಆರೋಗ್ಯ ಸಂಘಟನೆಯ ಜಾಗತಿಕ ತಜ್ಞರ ಗುಂಪು, ಆರ್ & ಡಿ ನೀಲನಕ್ಷೆ ಸೈಂಟಿಫಿಕ್ ಅಡ್ವೈಸರಿ ಗ್ರೂಪ್‍ನ್ನು ಒಟ್ಟುಗೂಡಿಸಿತು. ೨೦೧೫ ರಿಂದ, ಇಐಡಿ ಗಳ ಕಿರುಪಟ್ಟಿಯನ್ನು ವಾರ್ಷಿಕವಾಗಿ ಪರಿಶೀಲಿಸಲಾಗಿದೆ ಮತ್ತು ಮೂಲತಃ ಐತಿಹಾಸಿಕವಾಗಿ ಸಾಂಕ್ರಾಮಿಕ ರೋಗಗಳಿಗೆ ಕಾರಣವಾದ ಎಬೋಲಾ ಮತ್ತು ಝಿಕಾ, ಭೌಗೋಳಿಕವಾಗಿ ತಿಳಿದಿರುವ ಹೆಸರುಗಳಾದ ಸಾರ್ಸ್ ಲಾಸ್ಸಾ ಜ್ವರ, ಮಾರ್ಬರ್ಗ್ ವೈರಸ್, ರಿಫ್ಟ್ ವ್ಯಾಲಿ ಜ್ವರ, ಮತ್ತು ನಿಪಾ ವೈರಸ್ ಇಂತಹ ಮುಂತಾದ ವ್ಯಾಪಕವಾಗಿ ತಿಳಿದಿರುವ ರೋಗಗಳನ್ನು ಒಳಗೊಂಡಿದೆ. ಅಂದಿನಿಂದ, ಕೋವಿಡ್-೧೯ ಅನ್ನು ಈ ಪಟ್ಟಿಗೆ ಸೇರಿಸಲಾಗಿದೆ. ಫೆಬ್ರವರಿ ೨೦೧೮ ರಲ್ಲಿ, ಜಿನೀವಾದಲ್ಲಿ ನಡೆದ ೨೦೧೮ ರ ಆರ್ & ಡಿ ಸಭೆಯ ನಂತರ, ಡಬ್ಲ್ಯುಎಚ್‌ಒ ತಿಳಿದಿರುವ ಅಜ್ಞಾತ ರೋಗದ ಸೋಂಕುಗಳಿಗೆ ಪ್ಲೇಸ್‌ಹೋಲ್ಡರ್ ಆಗಿ ಡಿಸೀಸ್ ಎಕ್ಸ್ ಅನ್ನು ಕಿರುಪಟ್ಟಿಗೆ ಸೇರಿಸಿದೆ. ಅಜ್ಞಾತ ರೋಗ ಸೋಂಕಿನಿಂದ ಉಂಟಾಗಬಹುದಾದ ಭವಿಷ್ಯದ ಸಾಂಕ್ರಾಮಿಕ ರೋಗದ ಸಾಧ್ಯತೆಯನ್ನು ಡಿಸೀಸ್ ಎಕ್ಸ್ ಪ್ಲೇಸ್‌ಹೋಲ್ಡರ್ ನಿಂದ ತಿಳಿಯಬಹುದು ಮತ್ತು ಡಬ್ಲ್ಯುಎಚ್‌ಒನ ಯೋಜನೆ ಮತ್ತು ಸಾಮರ್ಥ್ಯಗಳು ಅಂತಹ ಘಟನೆಗೆ ಹೊಂದಿಕೊಳ್ಳುತ್ತದೆ ಎಂದು ಖಚಿತಪಡಿಸಿತು. ೨೦೧೮ ರ ಪ್ರಕಟಣೆಯಲ್ಲಿ, ಡಬ್ಲ್ಯುಎಚ್‌ಒ ನೀಲನಕ್ಷೆ ಆದ್ಯತೆಯ ಕಾಯಿಲೆಗಳ ನವೀಕರಿಸಿದ ಕಿರುಪಟ್ಟಿಯ ಬಗ್ಗೆ ಹೀಗೆ ಹೇಳಿದೆ: "ಮನುಷ್ಯನಿಗೆ ತಿಳಿದಿಲ್ಲದ ರೋಗಕಾರಕದಿಂದ ಗಂಭೀರವಾದ ಸಾಂಕ್ರಾಮಿಕ ರೋಗವು ಉಂಟಾಗಬಹುದು ಎಂಬ ಜ್ಞಾನವನ್ನು ಡಿಸೀಸ್ ಎಕ್ಸ್ ಪ್ರತಿನಿಧಿಸುತ್ತದೆ". ಜಾನ್-ಅರ್ನೆ ರೊಟ್ಟಿಂಗನ್ ಹೀಗೆ ಹೇಳಿದರು : "ಮೊದಲು ನಾವು ನೋಡಿರದ ಒಂದು ದೊಡ್ಡ ಸಂಗತಿಯೊಂದನ್ನು ಏಕಾಏಕಿ ನಾವು ನೋಡುವ ಸಾಧ್ಯತೆಯಿದೆಯೆಂದು ಇತಿಹಾಸವು ಹೇಳುತ್ತದೆ ಮತ್ತು ರೋಗನಿರ್ಣಯ ಪರೀಕ್ಷೆಗಳ ವಿಷಯದಲ್ಲಿ ನಾವು ಸುಲಭವಾಗಿ ಲಸಿಕೆಗಳನ್ನು ತಯಾರಿಸುತ್ತೇವೆ ಮತ್ತು ಯೋಜಿಸುತ್ತೇವೆ ಆದರೆ ಅದನ್ನು ಖಚಿತಪಡಿಸಿಕೊಂಡು ಎಕ್ಸ್‌ನ್ನು ಸೇರಿಸುವುದು ಕಷ್ಟವೆನಿಸಬಹುದು". ಯುಎಸ್ ತಜ್ಞ ಆಂಥೋನಿ ಫೌಸಿ ಹೀಗೆ ಹೇಳಿದರು: ಡಬ್ಲ್ಯುಎಚ್‌ಒ ವೇಗದಿಂದ ಪ್ಲಾಟ್‌ಫಾರ್ಮ್ ತಂತ್ರಜ್ಞಾನಗಳನ್ನು ರಚಿಸಬೇಕು ಮತ್ತು ಅಂತಹ ಪ್ಲ್ಯಾಟ್‌ಫಾರ್ಮ್‌ಗಳನ್ನು ಅಭಿವೃದ್ಧಿಪಡಿಸಲು ಡಬ್ಲ್ಯುಎಚ್‌ಒ ಫ್ಲೇವಿವೈರಸ್‌ಗಳನ್ನು ಸೇರಿದಂತೆ ಸಂಪೂರ್ಣ ವರ್ಗದ ವೈರಸ್‌ಗಳನ್ನು ಸಂಶೋಧಿಸಬೇಕು ಮತ್ತು ನೀವು ಅವುಗಳ ಸಾಮಾನ್ಯತೆಗಳ ಬಗ್ಗೆ ತಿಳುವಳಿಕೆಯನ್ನು ಬೆಳೆಸಿಕೊಂಡರೆ, ನೀವು ಹೆಚ್ಚು ವೇಗವಾಗಿ ಪ್ರತಿಕ್ರಿಯಿಸಬಹುದು". == ಜನಪ್ರಿಯ ಸಂಸ್ಕೃತಿ == ೨೦೧೮ರಲ್ಲಿ, ಲಂಡನ್ ಮ್ಯೂಸಿಯಂ "ಡಿಸೀಸ್ ಎಕ್ಸ್: ಲಂಡನ್‌ನ ಮುಂದಿನ ಸಾಂಕ್ರಾಮಿಕ?" ಎಂಬ ಶೀರ್ಷಿಕೆಯ ಪ್ರದರ್ಶನವನ್ನು ನಡೆಸಿತು, ಇದನ್ನು ೧೯೧೮ ರಿಂದ ಸ್ಪ್ಯಾನಿಷ್ ಜ್ವರ ಸಾಂಕ್ರಾಮಿಕದ ಶತಮಾನೋತ್ಸವಕ್ಕಾಗಿ ಆಯೋಜಿಸಲಾಗಿತ್ತು. ಈ ಪದವು ಜಾಗತಿಕ ಸಾಂಕ್ರಾಮಿಕ ರೋಗಗಳನ್ನು ಒಳಗೊಂಡಿರುವ ಹಲವಾರು ಕಾಲ್ಪನಿಕ ಪುಸ್ತಕಗಳ ಶೀರ್ಷಿಕೆಯಲ್ಲಿ ಒಳಗೊಂಡಿದೆ, ಉದಾಹರಣೆಗೆ ರೋಗ (೨೦೨೦), ಮತ್ತು ಡಿಸೀಸ್ ಎಕ್ಸ್: ದಿ ಔಟ್‍ಕವರ್. == ತಂತ್ರ == ೨೦೨೨ ರಲ್ಲಿ ಪ್ರಕಟವಾದ ಪ್ರಬಂಧ, ಡಿಸೀಸ್ ಎಕ್ಸ್ ತಯಾರಿಗಾಗಿ ಈ ಕೆಳಗಿನ ತಂತ್ರಗಳನ್ನು ಪಟ್ಟಿಮಾಡಿದೆ: ಸ್ಪಿಲ್‌ಓವರ್‌ನ ಪರಿಣಾಮವಾಗಿ ಮಾನವರಲ್ಲಿ ಹೊಸ ಕಾಯಿಲೆಯ ಹರಡುವಿಕೆಯ ಪರಿಚಯ ಮತ್ತು ಅದರ ಅಪಾಯವನ್ನು ಕಡಿಮೆ ಮಾಡುವ ಕ್ರಮಗಳು. ಸಾಂಕ್ರಾಮಿಕ ಏಜೆಂಟ್ ಅನ್ನು ತ್ವರಿತವಾಗಿ ಪತ್ತೆಹಚ್ಚಲು ಮತ್ತು ಅನುಕ್ರಮಗೊಳಿಸಲು, ಮಾನವರು ಮತ್ತು ಪ್ರಾಣಿಗಳಲ್ಲಿ ರೋಗದ ಕಣ್ಗಾವಲು ಸುಧಾರಿಸುವುದು. ವೈದ್ಯಕೀಯ ಪ್ರತಿತಂತ್ರಗಳ ಅಭಿವೃದ್ಧಿ ಮತ್ತು ಉತ್ಪಾದನೆಯ ನಡುವಿನ ಸಮಯದ ವಿಳಂಬವನ್ನು ಕಡಿಮೆ ಮಾಡಲು ಸಂಶೋಧನಾ ಕಾರ್ಯಕ್ರಮಗಳನ್ನು ಬಲಪಡಿಸುವುದು. ದೊಡ್ಡ ಪ್ರಮಾಣದ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಔಷಧೀಯ (ಉದಾ:ವ್ಯಾಕ್ಸಿನೇಷನ್) ಮತ್ತು ಔಷಧೀಯವಲ್ಲದ (ಉದಾ:ಸಾಮಾಜಿಕ ಅಂತರ) ಕ್ರಮಗಳ ತ್ವರಿತ ಅನುಷ್ಠಾನ. ಔಷಧಗಳು ಮತ್ತು ಲಸಿಕೆಗಳ ನ್ಯಾಯಯುತ ವಿತರಣೆ ಮತ್ತು ಜಾಗತಿಕ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ಅಂತರರಾಷ್ಟ್ರೀಯ ಪ್ರೋಟೋಕಾಲ್‌ಗಳನ್ನು ಅಭಿವೃದ್ಧಿಪಡಿಸಿವುದು. == ಇವುಗಳನ್ನು ನೋಡಿ == ಸಾಂಕ್ರಾಮಿಕ ಪೂರ್ವಸಿದ್ಧತೆ ನಾವೀನ್ಯತೆಗಳ ಒಕ್ಕೂಟ (ಸಿಇಪಿಐ) ಸಾಂಕ್ರಾಮಿಕ ರೋಗ ಸಿದ್ಧತೆಗಾಗಿ ಜಾಗತಿಕ ಸಂಶೋಧನಾ ಸಹಯೋಗ (ಗ್ಲೋಪಿಐಆರ್-ಆರ್) ಸಂಶ್ಲೇಷಿತ ವೈರಾಲಜಿ ಜೈವಿಕ ಭಯೋತ್ಪಾದನೆ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == 2020-03-01 ವೇಬ್ಯಾಕ್ ಮೆಷಿನ್ ನಲ್ಲಿ. (6-7 2018) ( 2018) () (16 2018) ( 2018)